tag:blogger.com,1999:blog-90696134982868529372024-02-20T15:05:21.746+05:30ಸುಪ್ತವರ್ಣ________________ಒಳಗಿನ ಬಣ್ಣ________________________________________________________________
ಮೇಲೆ ಸ್ವಚ್ಛ ಬಿಳಿ. ಒಳಗೆ ಬಣ್ಣ ಬಣ್ಣ. ಒಮ್ಮೊಮ್ಮೆ ಕಾಮನಬಿಲ್ಲು. ಕೆಲವೊಮ್ಮೆ ಹಳದಿ, ಮತ್ತೊಮ್ಮೆ ಹಸಿರು, ಮಗದೊಮ್ಮೆ ನೀಲಿ. ಎಲ್ಲವೂ ಸಂದರ್ಭಕ್ಕೆ ತಕ್ಕಂತೆ. ನಿಜ ಜೀವನದ ಬಿಳಿಯನ್ನು ಅಕ್ಷರದಲ್ಲಿ ಬಣ್ಣವಾಗಿಸುವ ಯತ್ನ, ಬಯಲಿಗಿಡುವ ಪ್ರಯತ್ನ.ಸುಪ್ತವರ್ಣhttp://www.blogger.com/profile/11480318076114768788noreply@blogger.comBlogger7125tag:blogger.com,1999:blog-9069613498286852937.post-61358738468410614452010-05-02T03:09:00.002+05:302010-05-02T12:28:29.248+05:30ಏಪ್ರಿಲ್ ಫೂಲ್ !ಬೆಂಗಳೂರಿನ ಕಾಲೇಜೊಂದರ ಕ್ರೀಡಾಂಗಣ. ಮಧ್ಯದಲ್ಲಿರುವ ಬಾಸ್ಕೆಟ್ ಬಾಲ್ ಅಂಗಳದ ಸುತ್ತಲೂ ಕಿಕ್ಕಿರಿದು ತುಂಬಿಕೊಂಡು ಕೂತ ವಿದ್ಯಾರ್ಥಿಗಳು. ಸುಮ್ಮನೇ ಹೀಗೆ ಗಾಳಿ ಸೋಕಿದರೂ ಕಿಸಕ್ಕೆನ್ನುವ ವಯಸ್ಸಿನ ಹುಡುಗಿಯರು, ಬೆನ್ನ ಹಿಂದ ಕೂತ ಹುಡುಗರ ನಿಮಿತ್ತ ಮಾತ್ರದ 'ಏನ್ ಮಗಾ' ಡಯಲಾಗುಗಳಿಗೆ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಮಧ್ಯೆ ಮಧ್ಯೆ ತಮ್ಮೊಳಗೇ ಮಾತಾಡಿಕೊಂಡು ನಗುತ್ತ, 'ನಾವು ಈಗಷ್ಟೇ ನಕ್ಕಿದ್ದು ನೀವಂದಿದ್ದಕ್ಕಲ್ಲ' ಎನ್ನುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಹುಡುಗರ ಕ್ರಿಯಾಶೀಲತೆ ಸುಪ್ತವರ್ಣhttp://www.blogger.com/profile/11480318076114768788noreply@blogger.com9tag:blogger.com,1999:blog-9069613498286852937.post-52087941140873358222010-02-13T21:19:00.008+05:302010-02-13T22:11:37.543+05:30ತಲೆಬುಡವಿಲ್ಲದ್ದುಇದು ನಿನ್ನೆ ಬೆಳಿಗ್ಗೆ ನಡೆದಿದ್ದು.
ಸರಕಾರದವರು ಹೊಸದಾಗಿ ಮಾಡಿರುವ ರಸ್ತೆ. ಹೊಸ ರಸ್ತೆಗಳು ಅಪರೂಪವಾದ್ದರಿಂದ ಜನ ಸ್ವಲ್ಪ ವೇಗವಾಗಿಯೇ ಚಲಿಸುತ್ತಾರೆ. ಅದು ಗೊತ್ತಿರುವುದರಿಂದಲೇ, ಸರಿಯಾಗಿ, ತಿರುವು ಇರುವ ಕಡೆ ಒಂದು 'ಹಂಪ್' ಇಟ್ಟಿದ್ದಾರೆ. ಅದು ಇರುವ ಜಾಗದಲ್ಲಿಯೇ ಇವತ್ತು ಕಾಲು ಸ್ವಲ್ಪ ಊನವಿರುವ ವ್ಯಕ್ತಿಯೊಬ್ಬ 'ಲಿಫ್ಟ್' ಗಾಗಿ ಕೈ ತೋರಿಸುತ್ತ ನಿಂತಿರುವುದು ಕಾಣಿಸಿತು.
ಹಿಂದೆ ನಾನು ಬೈಕ್ ಓಡಿಸುತ್ತಿದ್ದಾಗ ಹೀಗೆ ಲಿಫ್ಟ್ ಕೇಳುತ್ತಿದ್ದ ವ್ಯಕ್ತಿಗಳನ್ನು ಸುಪ್ತವರ್ಣhttp://www.blogger.com/profile/11480318076114768788noreply@blogger.com14tag:blogger.com,1999:blog-9069613498286852937.post-20613967901479366672009-11-18T13:05:00.000+05:302009-11-18T13:05:22.880+05:30ಕನ್ನಡ ಮತ್ತು ಎನ್ನಡಕನ್ನಡ ಸಂಘವೊಂದು ಕನ್ನಡ ಮಾತನಾಡದ ರೆಡಿಯೋ ಸ್ಟೇಷನ್ ಮೇಲೆ ದಾಳಿ ಮಾಡಿದ ಸುದ್ದಿ ಪೇಪರಿನಲ್ಲಿತ್ತು. "ಏನು ಮೂರ್ಖತನ ನೋಡು. ಜನ ಬೇಕಾದ್ದು ಕೇಳುತ್ತಾರೆ, ಹೀಗ್ಯಾಕೆ ಇವರು ಕಂಡವರ ಮೇಲೆಲ್ಲ ಹರಿಹಾಯುತ್ತಾರೆ? cheap ರಾಜಕೀಯ", ಇಂಗ್ಲೀಷಿನಲ್ಲಿ ಹೇಳಿದಳು.
"ಇದೇ ಚೆನ್ನೈನಲ್ಲಿ ನಡೆದರೆ ನಿನ್ನ ಅಭಿಪ್ರಾಯ ಹೀಗೇ ಇರುತ್ತಿತ್ತೇ?" ನಾನೂ ಇಂಗ್ಲಿಷ್ ನಲ್ಲಿ ಕೇಳಿದೆ. ನನಗೂ ಅವಳಿಗೂ ಮಧ್ಯದ ಮೊದಲ ಸೇತುವೆ ಇಂಗ್ಲೀಷೇ, ಈಗ ಇಂಗ್ಲಿಷಿನ ಜೊತೆ ಪ್ರೇಮವೂ ಇದೆ!
"ಅಯ್ಯೋ! ಎಲ್ಲಿ ನಡೆದರೂ ಒಂದೇ. ಸುಪ್ತವರ್ಣhttp://www.blogger.com/profile/11480318076114768788noreply@blogger.com14tag:blogger.com,1999:blog-9069613498286852937.post-21408657998946813202009-11-09T23:00:00.003+05:302009-11-10T00:05:07.558+05:30ಶಾಂತಾರಾಂ ಮತ್ತು ಅಲಾರಾಂಶಾಂತಾರಾಮನಿಗೆ ಇತ್ತಿತ್ತಲಾಗಿ ಒಂದು ಕಿವಿ ಕೇಳಿಸುತ್ತಿಲ್ಲ.
ಬೆಳಗಿನ ಜಾವ ಐದು ಘಂಟೆಗೆ ಸರಿಯಾಗಿ ಅಲಾರಾಂ ಕಿರುಚತೊಡಗಿತು. ಯಾವತ್ತೂ ಅಷ್ಟು ಬೇಗ ಎದ್ದಿರದ ಶಾಂತಾರಾಮನಿಗೆ ತಾನು ಯಾರು ಎನ್ನುವುದು ಗೊತ್ತಾಗಲು ಐದು ಸೆಕೆಂಡೂ, ತಾನೆಲ್ಲಿದ್ದೇನೆ ಎಂದು ಗೊತ್ತಾಗಲು ಮತ್ತೈದು ಸೆಕೆಂಡೂ, ಈಗ ಕಿರುಚುತ್ತಿರುವುದು ಅಲಾರಾಂ ಎಂದು ಗೊತ್ತಾಗಲು ಇನ್ನೆರಡು ಸೆಕೆಂಡೂ ಹಿಡಿಯಿತು. ಮತ್ತೆರಡು ಸೆಕೆಂಡುಗಳಲ್ಲಿ ಅಲಾರಾಮಿನ ಬಾಯಿ ಮುಚ್ಚಿಸದಿದ್ದರೆ ಪಕ್ಕದ ರೂಮಿನಲ್ಲಿ ರಾತ್ರಿ ಲೇಟಾಗಿ ಮಲಗಿರುವ ರತ್ನಮಾಲ ಸುಪ್ತವರ್ಣhttp://www.blogger.com/profile/11480318076114768788noreply@blogger.com12tag:blogger.com,1999:blog-9069613498286852937.post-91504425141442011802009-11-03T20:39:00.006+05:302009-11-08T15:21:27.777+05:30ಚಕ್ರದಿಂದ ಚಕ್ರಕ್ಕೆ...ಬಸ್ಸಲ್ಲಿ ಓಡಾಡುವುದು ಮಹಾಕಷ್ಟ ಎಂದು ಗೊತ್ತಾದದ್ದು ಮೂರು ತಿಂಗಳ ಸಂಬಳ ಬಂದು ಹಳೆಯ ಸಾಲವೆಲ್ಲ ತೀರಿ, ಬ್ಯಾಂಕಿನಲ್ಲಿ ಶೇಖರಕೊಂಡ ಇಪ್ಪತ್ತು ಸಾವಿರ ರೂಪಾಯಿ ಕಣ್ಣು ಕುಕ್ಕತೊಡಗಿದಾಗ! ತಡವೇಕೆ ಎಂದು ಅದೇ ತಿಂಗಳು ಒಂದು ಬೈಕ್ ಕೊಂಡುಕೊಂಡೆ. ಉಳಿದ ದುಡ್ಡಿಗೆ ಬ್ಯಾಂಕುಗಳಿದ್ದಾವಲ್ಲ. ಅವರಿರುವುದೇತಕ್ಕೆ?
ನನ್ನದು ಸಖ್ಖತ್ ಲೇಟೆಸ್ಟ್ ಬೈಕು. ಥೇಟ್ ಕಾರಿನಲ್ಲಿ ಕೂತಂತೆಯೇ ಅನಿಸುತ್ತದೆ(ನಾನ್ಯಾವತ್ತೂ ಕಾರಿನಲ್ಲಿ ಕೂತಿಲ್ಲ, ಇದು ಹಾಗೆಂದು ನನ್ನ ಸ್ನೇಹಿತರು ಹೇಳುವುದನ್ನು ಕೇಳಿದ್ದೇನೆ). ಸುಪ್ತವರ್ಣhttp://www.blogger.com/profile/11480318076114768788noreply@blogger.com4tag:blogger.com,1999:blog-9069613498286852937.post-19254499781915028742009-09-05T17:16:00.052+05:302009-09-11T21:35:46.076+05:30ಗಿಳಿಯು ಪಂಜರದೊಳಿಲ್ಲ !ಆಘಾತಗಳೆಲ್ಲವೂ ಯಾಕೆ ಅನಿರೀಕ್ಷಿತವಾಗಿರುತ್ತವೋ? ಅನಿರೀಕ್ಷಿತವಾಗಿರದಿದ್ದರೆ ಅದನ್ನು ಆಘಾತ ಎನ್ನುವುದಿಲ್ಲವೇ? ಅಂತೂ ಅವತ್ತಿನ ಮಟ್ಟಿಗೆ ನನ್ನ ಗ್ರಹಚಾರ ಸರಿ ಇರಲಿಲ್ಲ.
ಬೇಸಿಗೆಯಲ್ಲಿ ಮಧ್ಯಾಹ್ನ ಮಾತ್ರ ಬಿಸಿಲು ಬೀಳುವ, ಮಳೆಗಾಲದಲ್ಲಿ ಒಂದು ಕ್ಷಣವೂ ಮಳೆ ನಿಲ್ಲದ, ಅಚ್ಚ ಹಸಿರಿನ ಬೆಟ್ಟಗಳ ನಡುವಿನ ಹಳ್ಳಿ ನಮ್ಮದು. ವರ್ಷದಲ್ಲಿ ಹೆಚ್ಚಿನ ಕಾಲ ಬೆಳಿಗ್ಗೆ ಹತ್ತು ಘಂಟೆಯವರಿಗೂ ಮಂಜು ಮುಸುಕಿರುತ್ತದೆ. ಅಡಿಗೆಗೆ ಗೋಬರ್ ಗ್ಯಾಸ್ ಬಳಸುವಷ್ಟು ಮುಂದುವರಿದ, ಆದರೆ ಸ್ನಾನದ ಒಲೆಗೆ ಇನ್ನೂ ಸುಪ್ತವರ್ಣhttp://www.blogger.com/profile/11480318076114768788noreply@blogger.com6tag:blogger.com,1999:blog-9069613498286852937.post-23634345996610037992009-08-24T21:04:00.072+05:302009-09-11T14:59:50.802+05:30ನೀ ಮಾಯೆಯೋ, ನಿನ್ನೊಳು ಮಾಯೆಯೋ !ಸೀತಾಪತಿ ಹಗಲುಕನಸುಗಾರ. ಕನಸನ್ನು ಅದೆಷ್ಟು ತನ್ಮಯತೆದಿಂದ ಅನುಭವಿಸುತ್ತಾನೆಂದರೆ, ಕನಸು ಕಾಣುತ್ತಿರುವಷ್ಟು ಹೊತ್ತು ಅದು ಕನಸೆಂದೇ ಅವನಿಗೆ ಅನ್ನಿಸುವುದಿಲ್ಲ. ಯಾವ ಕನಸೂ ನಿಜವಾಗಲೆಂದು ಅವನು ಬಯಸಿಲ್ಲ. ಹೇಗಿದ್ದರೂ ಅವು ನಿಜವಾಗುವಂಥ ಕನಸುಗಳೇ ಅಲ್ಲವಲ್ಲ !
ಒಮ್ಮೆ ಆತ ಕ್ರಿಕೆಟ್ ಆಟಗಾರ. ಸುಮ್ಮನೆ ಅಂತಿಂಥ ಆಟಗಾರನಲ್ಲ. ಆತ ಫೀಳ್ಡಿಗಿಳಿದನೆಂದರೆ ಒಂದು ಚೆಂಡೂ ಬಿಡದಂತೆ ಸಿಕ್ಸರುಗಳ ಸುರಿಮಳೆ. ನಡುವೆ ಬೇಕೆಂದರೆ ಬೌಂಡರಿ. ಔಟಾದದ್ದು ಒಂದೋ ಎರಡೋ ಸಲ ಅಷ್ಟೇ. ಹೀಗಿರುವಾಗ ಅವನ ಸುಪ್ತವರ್ಣhttp://www.blogger.com/profile/11480318076114768788noreply@blogger.com1